PSI 545 & 402 Physical exam Doubts and Clarifications

Posted by Vidhyarthimitra on

 PSI 545 & 402  Physical exam Doubts and Clarifications

ತಾಳ್ಮೆಯಿಂದ ಓದಿ usefull ಅಂಸಿದ್ರೆ ಶೇರ್ ಮಾಡಿ

Civil pc exam date Click here

PSI PC FDA SDA test series visit here Mock tests 


1.  ನಮ್ದು Hall ticket  ಇನ್ನೂ  ಬಂದಿಲ್ಲ ಯಾಕೆ ?‌


ನಾನು ಈ ಹಿಂದೆ ಹೇಳಿದ ಹಾಗೆ ದೈಹಿಕ ಪರೀಕ್ಷೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ. 


ಮೊದಲನೇ ಅಂತ: 545& 402 ಎರಡು ಅಧಿಸೂಚನೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ. ನೆನಪಿನಲ್ಲಿಟ್ಟುಕೊಳ್ಳಿ 545 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ 402 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆದರೆ 402 ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ‌ YES  ಅಂತ ಹಾಕದೆ ಇದ್ದವರಿಗೆ ಈ ಹಂತದಲ್ಲಿ  ಹಾಲ್ಟಿಕೆಟ್ ಬಂದಿಲ್ಲ. ಇದು ಕೇವಲ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ. 



2ನೆ ಹಂತ:  ಮೊದಲ ಹಂತದ ದೈಹಿಕ ಪರೀಕ್ಷೆಗಳು ಮುಗಿದ ನಂತರ ಎರಡನೇ ಹಂತದಲ್ಲಿ 545  ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಿದವರಿಗೆ ನಡೆಸಲಾಗುತ್ತದೆ.  ಇದರ ದಿನಾಂಕವನ್ನು ಮತ್ತು call letter  ಆಗಸ್ಟ್ ಹನ್ನೊಂದರ ನಂತರ (ಮೊದಲ ಹಂತದ ಎಲ್ಲಾ ಪರೀಕ್ಷೆಗಳು ಮುಗಿದ ನಂತರ)  ಪ್ರಕಟಿಸಬಹುದು.  


3ನೇ ಹಂತ: ಎರಡನೇ ಹಂತದ ಪರೀಕ್ಷೆಗಳು ಮುಗಿದ ನಂತರ 402 ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಿದವರಿಗೆ ಈ ಹಂತದಲ್ಲಿ ನಡೆಸಲಾಗುತ್ತದೆ. ಈ ಹುದ್ದೆಗಳ call letter & ದಿನಾಂಕಗಳನ್ನು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಎರಡನೇ ಹಂತದ ಪರೀಕ್ಷೆಗಳು ಮುಗಿದ ಬಳಿಕ ಪ್ರಕಟಿಸಬಹುದು. 


2. ನಾನು ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದೇನೆ (545&402)  ಮತ್ತು 402  ಹುದ್ದೆಗಳಿಗೆ ಹಾಕುವಾಗ , ನೀವು 545  ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವಿರಾ ಎಂದು ಕೇಳಿದಾಗ YES  ಎಂದು ಹಾಕಿದ್ದೇನೆ. ನನ್ನ ದೈಹಿಕ ಪರೀಕ್ಷೆಗಳು ಹೇಗೆ ನಡೆಸಲಾಗುತ್ತದೆ? 


 ನಿಮಗೆ ಈಗಾಗಲೇ ದೈಹಿಕ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ನಿಮಗೆ ನಿಗದಿಪಡಿಸಿದ ಸ್ಥಳ ಮತ್ತು ದಿನಾಂಕದಂದು ನೀವು ಪರೀಕ್ಷೆಗೆ ಹಾಜರಾಗಬೇಕು. ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ , ಮೂರನೇ ಹಂತದಲ್ಲಿ ನಡೆಯುವ ‌402 ‌ ಹುದ್ದೆಗಳ ದೈಹಿಕ ಪರೀಕ್ಷೆಗೆ ಹಾಜರಾಗುವ ಅವಶ್ಯಕತೆ ಇಲ್ಲ. ಅರ್ಥಾತ್ ನೀವು ಒಂದು ಪರೀಕ್ಷೆಯನ್ನು ಪಾಸಾದರೆ ಎರಡಕ್ಕೆ ಅರ್ಹತೆಯನ್ನು ಪಡೆಯುತ್ತೀರಿ. 



ಒಂದು ವೇಳೆ ಮೊದಲ ಹಂತದಲ್ಲಿ ಫೇಲಾದರೆ, ನಿಮಗೆ ಮೂರನೇ ಹಂತದಲ್ಲಿ(402 ಹುದ್ದೆ)  ಅವಕಾಶ ಕೊಡಲಾಗುತ್ತದೆ ‌. ಈ ಅವಕಾಶದಲ್ಲಿ ನೀವು ಪಾಸಾದರೆ ಕೇವಲ 402 ಹುದ್ದೆಗಳಿಗೆ ಮಾತ್ರ ಅರ್ಹತೆಯನ್ನು ಪಡೆಯುತ್ತೀರಿ ಹೊರತು ಎರಡುದೇ ಗಳಿಗೆ ಅಲ್ಲ. 


3. ನಾನು 545 post & 402 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದೇನೆ, ಆದರೆ   ನೀವು  545  ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವಿರಾ ಎಂದು ಕೇಳಿದಾಗ YES ಅಂತ ಹಾಕಿಲ್ಲ. ನಮಗೆ ಹೇಗೆ ನಡೆಸುತ್ತಾರೆ. ?



545 ಹುದ್ದೆಗಳಿಗೆ ಎರಡನೆಯ ಹಂತದಲ್ಲಿ ನಿಮಗೆ ದೈಹಿಕ ಪರೀಕ್ಷೆ ಇರುತ್ತದೆ. ಆದರೆ ಇದರಲ್ಲಿ ಪಾಸಾದರೆ ಎರಡಕ್ಕೂ ಅರ್ಹತೆಯನ್ನು ಕೊಡುವುದು ಅನುಮಾನ. ಏಕೆಂದರೆ ನಿಮ್ಮ ಎರಡು ಅರ್ಜಿಗಳು ಲಿಂಕ್ ಇಲ್ಲ. ಹಾಗಾಗಿ ಪಾಸಾದರೆ ಇದೊಂದಕ್ಕೆ ಅರ್ಹತೆಯನ್ನು ಕೊಡುತ್ತಾರೆ. 



402 ಹುದ್ದೆಗಳ ದೈಹಿಕ ಪರೀಕ್ಷೆಯನ್ನು ಮೂರನೆಯ ಹಂತದಲ್ಲಿ ನಡೆಸಲಾಗುತ್ತದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ಈ ಅವಧಿಯಲ್ಲಿ ದೈಹಿಕ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಈ ದೈಹಿಕ ಪರೀಕ್ಷೆಯಲ್ಲಿ ಪಾಸಾದರೆ ಈ ಒಂದು ಹುದ್ದೆಗೆ ಮಾತ್ರ ಅರ್ಹತೆಯನ್ನು ಗಳಿಸುತ್ತಿರಿ . 



4. ನಾನು ಒಂದೇ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಿದ್ದೇನೆ ?‌

ನೀವು 545 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೆ ಎರಡನೆಯ ಹಂತದಲ್ಲಿ ಮತ್ತು 402 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೆ ಮೂರನೆ ಹಂತದಲ್ಲಿ ದೈಹಿಕ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. 



5. ನಾನು 545 ಹುದ್ದೆಗಳಿಗೆ ಅಥವಾ 402 ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ನನ್ನ ಪದವಿ ಮುಗಿದಿರಲಿಲ್ಲ ಅಥವಾ ನನಗೆ ಅರ್ಹತೆ ಇರಲಿಲ್ಲ , ಆದರೂ ಕೂಡ ಅನುಭವ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ನಾವು ಹೇಗೆ ಮಾಡಬೇಕು?


ಮೊದಲನೆಯದಾಗಿ ನೀವು 545 ಹುದ್ದೆಗಳಿಗೆ ಅರ್ಹತೆ ಇರದೆ, ಕೇವಲ 402 ಹುದ್ದೆಗಳಿಗೆ ಅರ್ಹತೆ ಇದ್ದಾಗ,  ನೀವು ಅಧಿಕೃತವಾಗಿ ಅರ್ಹತೆ ಇರುವುದು 402 ಹುದ್ದೆಗಳಿಗೆ ಮಾತ್ರ, ನೀವು ಎರಡು ಹುದ್ದೆ ಗಳಿಗೆ ದೈಹಿಕ ಪರೀಕ್ಷೆಗೆ ಹೋದರೂ ಕೂಡ ಅರ್ಹತೆಯಿಲ್ಲದ ಅಧಿಸೂಚನೆಯಲ್ಲಿ ನಿಮಗೆ ಅವಕಾಶ ಕೊಡುವುದಿಲ್ಲ. ಒಂದು ವೇಳೆ ಕೊಟ್ಟರು ಕೂಡ ಲಿಖಿತ ಪರೀಕ್ಷೆಯ ಫಲಿತಾಂಶ ಬಂದ ಬಳಿಕ ನೀವು ಅನರ್ಹ ಆಗಿರುತ್ತೀರಿ. 


ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸರಳವಾಗಿ ಯಾವುದಕ್ಕೆ ಅರ್ಹತೆ ಇಲ್ಲವೋ ಅದನ್ನು ಬಿಟ್ಟು ಬಿಡಿ. ಇಲ್ಲ ನನಗೆ ಅನುಭವ ಆಗಬೇಕು ಎಂದರೆ ಮೈದಾನಕ್ಕೆ ಹೋಗಿರೋ ಮಾಡಿ. ಏನೂ ಆಗುವುದಿಲ್ಲ. ನಿಮಗೆ ಯಾರು ಕೇಸ್ ಮಾಡುವುದಿಲ್ಲ. 


ಪೊಲೀಸ್ ಆಗುವವರಿಗೆ ಪೊಲೀಸ್ ಇಲಾಖೆ ತುಂಬಾ ಸ್ನೇಹಿಯಾಗಿ ರುತ್ತದೆ.



5. ಪ್ರಸ್ತುತ ಮಳೆ ಬರುತ್ತಿರುವುದರಿಂದ ದೈಹಿಕ ಪರೀಕ್ಷೆಯನ್ನು ಮುಂದೂಡಲಾಗುತ್ತದೆಯೇ? ನಮಗೆ ಪ್ರಾಕ್ಟೀಸ್ ಮಾಡಲು ಸಾಧ್ಯವಾಗುತ್ತಿಲ್ಲ ಹೇಗೆ ಮಾಡುವುದು? ಅವಮಾನ ಇಲಾಖೆ ಮುಂದಿನ 15 ದಿನಗಳ ಕಾಲ ಮಳೆ ಬರುತ್ತದೆ ಎಂದು ಹೇಳಿದ್ದಾರೆ, ಹೇಗೆ ಮಾಡಬೇಕೆಂದು ಗೊತ್ತಾಗುತ್ತಿಲ್ಲ ? 


ಮಳೆಗಾಲ ಇರುವುದರಿಂದಲೇ ಹಂತಹಂತವಾಗಿ ನಡೆಸಲಾಗುತ್ತಿದೆ. ನಿಮಗೆ ನಿಗದಿಪಡಿಸಿದ ದಿನ ಮಳೆ ಬಂದರೆ, ಮೈದಾನವು ದೈಹಿಕ ಪರೀಕ್ಷೆಗೆ ಸೂಕ್ತವಲ್ಲ ಎಂದೆನಿಸಿದರೆ ಇಲಾಖೆಯ  ಅಧಿಕಾರಿಗಳು ಮತ್ತು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಆ ದಿನಾಂಕವನ್ನು ಮುಂದೂಡುತ್ತಾರೆ. ಅದರ ಬಗ್ಗೆ ನೀವೊಬ್ಬರೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ಆ ದಿನದ ಐದುನೂರು ಜನರು ಇರುತ್ತಾರೆ. ಜಾಸ್ತಿ ಕೆಲಸಕ್ಕೆಬಾರದ ಆಲೋಚನೆ ಮಾಡಿ ತಲೆಕೆಡಿಸಿಕೊಳ್ಳಬೇಡಿ.


ಮಳೆ ಬರುತ್ತಿದೆ ಪ್ರಾಕ್ಟೀಸ್ ಮಾಡಲು ಸಾಧ್ಯವಾಗುತ್ತಿಲ್ಲ ಏನು ಮಾಡುವುದು? 
ಈ ನಿಮ್ಮ ಸಮಸ್ಯೆಯನ್ನು ಯಾರೂ ಕೇಳುವುದಿಲ್ಲ. ಮೈದಾನಕ್ಕೆ ಹೋಗಿ ಪ್ರಾಕ್ಟಿಸ್ ಮಾಡಿಲ್ಲವೆಂದರೆ ನನ್ನ ಸಲಹೆ ಮನೆಯಲ್ಲಿಯೇ ಇದ್ದುಕೊಂಡು ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಿ ‌.  5 mter sprint  ಎನ್ನುವ ಒಂದು ವಿಡಿಯೋವನ್ನು ನಾನೇ ಮಾಡಿದ್ದೇನೆ ಅದನ್ನು ನೋಡಿ. ನೀವು ನಿರಂತರವಾಗಿ ಎರಡು ನಿಮಿಷ ರನ್ ಮಾಡಿದರೆ ದೈಹಿಕ ಕ್ಷಮತೆ ತಾನೆ ಇರುತ್ತದೆ. ಒಟ್ಟಿನಲ್ಲಿ ನಿಮ್ಮ ಸಮಸ್ಯೆಗಳನ್ನು ಕೇಳುವಲ್ಲಿ ಯಾರಿಗೆ ಸಮಸ್ಯೆ ಸಮಯವಿಲ್ಲ. ಸ್ಪರ್ಧಾತ್ಮಕ ತಯಾರಿಯಲ್ಲಿ ಇರುವವರು ನಿಮ್ಮ ಸುರಕ್ಷತೆ ನೀವು ನೋಡಿಕೊಳ್ಳಿ. 

ಅವಮಾನ ಇಲಾಖೆಯ ಮುನ್ಸೂಚನೆಗಳು ಇಲಾಖೆಗೂ ಗೊತ್ತಿರುತ್ತದೆ. ಅದರ ಬಗ್ಗೆ ನೀವು ಜಗತ್ತು ತಲೆಯ ಮೇಲೆ ಬಿದ್ದಿರುವ ಹಾಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಎಲ್ಲರಲ್ಲಿ ನಾನೊಬ್ಬ ಎಂದು ಮುನ್ನುಗ್ಗಬೇಕು. ಎಷ್ಟು ದಿನವಾದರೂ ಮಳೆ ಬರಲಿ . ಒಂದಲ್ಲ ಒಂದು ದಿನ ನಿಲ್ಲುತ್ತದೆ ಅಂದು ಪರೀಕ್ಷೆ ನಡೆಸುತ್ತಾರೆ. ಪ್ರತಿಯೊಂದು ಸಣ್ಣಪುಟ್ಟ ಕಾರಣಗಳನ್ನು ನೀಡುತ್ತಾ ಹೋದರೆ ದೈಹಿಕ ಪರೀಕ್ಷೆಗಳನ್ನು ಮುಗಿಸಲು ಐದು ವರ್ಷ ಹಿಡಿಯುತ್ತದೆ. ಆಲೋಚನೆಗಳು ವಾಸ್ತವವಾಗಿ ಇರಲಿ.
ದೈಹಿಕ ಪರೀಕ್ಷೆಗಳನ್ನು ಮತ್ತೆ ಮುಂದೂಡಲಾಗುತ್ತದೆ ಎಂಬುದನ್ನು ‌ ಹೆಚ್ಚು ಚಿಂತನೆ ಮಾಡಬೇಡಿ. ದೇಹ ಆಲಸ್ಯದಿಂದ ಶಕ್ತಿ ಕಳೆದುಕೊಳ್ಳುತ್ತದೆ. ಫೇಲ್ ಆಗುವ ಸಾಧ್ಯತೆ ಅಧಿಕವಾಗುತ್ತದೆ.

6.  ದೈಹಿಕ ಪರೀಕ್ಷಾ ಕೇಂದ್ರವನ್ನು ಬದಲಿಸಲು ಸಾಧ್ಯತೆ ಇದೆಯಾ?‌ ನನಗೆ ಕೋವಿಡ್ ಬಂದಿದ್ದರೆ ಅಥವಾ ಸಂಪರ್ಕದಲ್ಲಿದ್ದರೆ ಹೇಗೆ ಮಾಡಬೇಕು? ನನಗೆ ಅನಾರೋಗ್ಯದ ಸಮಸ್ಯೆ ಇತ್ತು ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ ಹೇಗೆ ಮಾಡೋದು? ‌
ದೈಹಿಕ ಪರೀಕ್ಷೆ ಕೇಂದ್ರವನ್ನು ಬದಲಿಸಲು ಸಾಧ್ಯವಿಲ್ಲ. ಇಲಾಖೆಗೆ ಸೇರುವ ಮುನ್ನವೇ ಅನುಕೂಲತೆಯನ್ನು ಬಯಸಿದರೆ ಅಸಾಧ್ಯ.

ನಿಮಗೆ ಕೋವಿಡ್ ಬಂದಿರುವುದರ ಬಗ್ಗೆ ಅಧಿಕೃತ ದಾಖಲೆಗಳನ್ನು ತೋರಿಸಿದರೆ ಅವಕಾಶ ಮಾಡಿಕೊಡಲಾಗುತ್ತದೆ
ನಿಮಗೆ ಅನಾರೋಗ್ಯ ಸಮಸ್ಯೆ ಇತ್ತು ವೈದ್ಯರು ವಿಶ್ರಾಂತಿಗೆ ಎಂದು ಹೇಳಿದರೆ ಇದನ್ನು ಪರಿಚಯ ಕೇಂದ್ರದ ಮುಖ್ಯಸ್ಥರು ಕೇಳುವುದು ಅನುಮಾನ.  ಒಂದು ವೇಳೆ ನೀವು ಅಧಿಕೃತ ದಾಖಲೆಗಳನ್ನು ತೋರಿಸಿದ್ದರೆ ಅವಕಾಶ ಮಾಡಿಕೊಡಬಹುದು.

ನಿಮ್ಮ ದೈಹಿಕ ಪರೀಕ್ಷೆ ನಡೆಯುವ ದಿನಾಂಕದಂದು ನಿಮ್ಮ ಬೇರೊಂದು ಪರೀಕ್ಷೆ ವಿದ್ದರೆ ಆ ದಿನಾಂಕದ ಪ್ರವೇಶ ಪತ್ರವನ್ನು ತೋರಿಸಿದರೆ ಪರಿಚಯ ಕೇಂದ್ರದ ಮುಖ್ಯಸ್ಥರು ಬೇರೊಂದು ದಿನ ಅವಕಾಶ ಮಾಡಿಕೊಡಬಹುದು. ಒಂದು ಗಮನಿಸಿ ನಿಮ್ಮ ಸ್ನಾತಕೋತ್ತರ ಪರೀಕ್ಷೆಯ ದಿನಾಂಕವನ್ನು ಹೊರತುಪಡಿಸಿ ಇರಬೇಕು. ನಿಮ್ಮ ಅನುಕೂಲಕ್ಕೆ ಆಗುವ ಹಾಗೆ ಬಂದರೆ ಅವಕಾಶ ನೀಡುವುದಿಲ್ಲ. 

7. ಪ್ರಮುಖ ಸಲಹೆಗಳು
✓ ವ್ಯಾಕ್ಸಿನೇಷನ್ ಕಡ್ಡಾಯವಲ್ಲ. ಆದರೆ ಕಾರಣಕ್ಕೆ ಸಂಬಂಧಿಸಿದ ನಿಯಂತ್ರಣ ನಿಯಮಗಳು ಕಡ್ಡಾಯ.
✓ ನಿಗದಿತ ಸಮಯಕ್ಕೆ ಬರದೆ ಇದ್ದರೆ ಅಥವಾ ದೈಹಿಕ ಪರೀಕ್ಷೆ ಕೇಂದ್ರದಲ್ಲಿ ಅಶಿಸ್ತನ್ನು ತೋರಿಸಿದ್ದಾರೆ ನಿಮ್ಮನ್ನು ಡಿಬಾರ್ ಮಾಡುವ ಸಂಪೂರ್ಣ ಅಧಿಕಾರ ಪರೀಕ್ಷೆ ಕೇಂದ್ರದ ಪ್ರತಿಯೊಬ್ಬ ಅಧಿಕಾರಿಗೂ ಇದೆ. ಇಲಾಖೆಗೆ ಸೇರುವ ಮುನ್ನ ಬೇಜಾಬ್ದಾರಿ ತನ ಮಾಡಬೇಡಿ. ಎಷ್ಟು ವಿನಯಶೀಲ ರಾಗಿ ತಾಳ್ಮೆಯಿಂದ ಇರುತ್ತೀರಿ ಅಷ್ಟು ಒಳ್ಳೆಯದು. ಯಾರಾದರೂ ಬೈದರೂ ಕೂಡ ಸ್ವಾರಿ ಸರ್ ಎಂದು ಹೇಳಿ. 
✓ ಯಾರಾದರೂ ನಿಮಗೆ ದೈಹಿಕ ಪರೀಕ್ಷೆಯನ್ನು ಪಾಸು ಮಾಡುವುದಾಗಿ ದುಡ್ಡು ಕೇಳುವುದು ಆಗಲಿ, ಇತರ ಆಮಿಷಗಳನ್ನು ಒಟ್ಟು ದಾಗಲಿ ಮಾಡಿದರೆ ನೆನಪಿನಲ್ಲಿಟ್ಟುಕೊಳ್ಳಿ ಅವರು ಇಲಾಖೆಯ ಅಧಿಕಾರಿಗಳೇ ಇದ್ದರೂ ಕೂಡ ಒಂದು ಸಲ ಗೊತ್ತಾದರೆ ಅವರು ಕೂಡ ಸಸ್ಪೆಂಡ್ ಆಗುತ್ತಾರೆ, ಮತ್ತೆ ನಿಮ್ಮ ಜೀವನದಲ್ಲಿ ಯಾವತ್ತೂ ಕೂಡ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗುವುದಿಲ್ಲ. ಸಂಪೂರ್ಣವಾಗಿ ಡಿಬಾರ್ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಅಡ್ಡದಾರಿ ಗಳಿಗೆ ಬಲಿಯಾಗಬೇಡಿ.
✓ ಪರೀಕ್ಷಾ ಕೇಂದ್ರದಲ್ಲಿ ಮುಖ್ಯಸ್ಥರಾಗಿ ಅಥವಾ ಉಪ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿಗಳು ಇದ್ದರೆ ತುಂಬಾ ಜಾಗೃತೆಯಿಂದ ಇರಿ. ಯಾವ ಅನುಕಂಪ ಮುಲಾಜು ಯಾವುದನ್ನು ನೋಡುವುದಿಲ್ಲ ಅವರು. ಅದರಲ್ಲೂ ಯುವಕರು  ಇದ್ದರಂತೂ ತುಂಬಾ ಹುಷಾರ್. 
✓ ಗಾಸಿಪ್ ಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡದೆ ಇಲಾಖೆಯ ಅಧಿಕೃತ ವೆಬ್ ಸೈಟ್ ಅನ್ನು ಪ್ರತಿದಿನ ಎರಡು ಮೂರು ಸಲ ಪರೀಕ್ಷಿಸುತ್ತಾ, ನಿಮ್ಮ ದೈಹಿಕ ಪರೀಕ್ಷೆಯ ತಯಾರಿ ಮತ್ತು ಲಿಖಿತ ಪರೀಕ್ಷೆಯ ತಯಾರಿ ನಡೆಸಿ. 
ಯಾವುದೇ ಮಾಹಿತಿ ಮತ್ತು ಮಾರ್ಗದರ್ಶನ ಅವಶ್ಯಕತೆ ಇದ್ದರೆ ನಾನು ನಿಮಗಾಗಿರುವ ವೇದಿಕೆಯಲ್ಲಿ ಹಂಚಿಕೊಳ್ಳುತ್ತಿದ್ದೇನೆ. 


ಎಲ್ಲರಿಗೂ ಒಳ್ಳೆಯದಾಗಲಿ 


Previous
« Prev Post

No comments:

Post a Comment